ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ಪುಣಚ ಮಹಾಶಕ್ತಿ ಕೇಂದ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಡಿ.06 ರಂದು ಇಡ್ಕಿದು ಸೊಸೈಟಿ ಸಭಾಭವನದಲ್ಲಿ ನಡೆಯಿತು. ಚುನಾವಣಾ ಪ್ರಚಾರ ಸಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು.
ಮಾಜಿ ವಿಟ್ಲ ಪಂಚಾಯತ್ ವಿರೋಧ ಪಕ್ಷ ನಾಯಕ,ಜಿಲ್ಲಾ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ, ಚುನಾವಣೆಯಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದ ಬಂದಂತಹ ಧಾರ್ಮಿಕ ಧುರೀಣ, ಕ್ರೀಡಾಪಟು ಅಶೋಕ್ ಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡ ಸುಂದರ ನಾಯ್ಕ್, ವಿನಯ ಕುಮಾರ್, ಪದ್ಮನಾಭ ಶೆಟ್ಟಿ, ರಾಜೇಶ್ ಬಾಳೆಕಲ್ಲು, ಮಹೇಶ್ ಗೌಡ, ಸತೀಶ್ ನಾಯಕ್, ಚಂದ್ರಶೇಖರ ಪಿ, ಗೀತಾ ಪಳನೀರು ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಪಕ್ಷದ ಧ್ವಜವನ್ನು ನೀಡುವ ಮೂಲಕ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.