ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ತೂಕವನ್ನು ಇಳಿಸುವ ಸುಳಿವನ್ನು ನೀಡಿದೆ.
ಸದ್ಯ ಮನೆಗಳಿಗೆ 14.2 ಕೆಜಿ ತೂಕದ ಸಿಲಿಂಡರ್ ಒದಗಿಸಲಾಗುತ್ತಿದೆ. ಸದ್ಯ ಲಭ್ಯವಿರುವ ಸಿಲಿಂಡರ್ ಗಳು ಹೆಚ್ಚು ತೂಕ ಹೊಂದಿರುವ ಕಾರಣ, ಮಹಿಳೆಯರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕಷ್ಟವಾಗುತ್ತಿದೆ. ಈ ಸಂಬಂಧ ರಾಜ್ಯಸಭೆಯಲ್ಲಿ ಭಾರವಾಗಿರುವ ಎಲ್ ಪಿಜಿ ಸಿಲಿಂಡರ್ ಗಳನ್ನು ಸಾಗಿಸಲು ಮನೆಗಳಲ್ಲಿಯ ಮಹಿಳೆಯರು ಕಷ್ಟಪಡುತ್ತಿದ್ದಾರೆ. ಜೊತೆಗೆ 14.2 ಕೆಜಿ ತೂಕದ ಸಿಲಿಂಡರ್ ದಾಸ್ತಾನುಗಳಿಂದ ಮನೆಗಳಿಗೆ ತಲುಪಿಸಲು ಕಷ್ಟವಾಗುತ್ತಿದೆ ಎಂದು ಸದಸ್ಯರೊಬ್ಬರು ಪ್ರಸ್ತಾಪಿಸಿದ್ದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಸರ್ಕಾರ ಎಲ್ ಪಿಜಿ ಸಿಲಿಂಡರ್ ಗಳ ತೂಕ ಇಳಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಜನರ ಅನುಕೂಲಕ್ಕಾಗಿ ಸಿಲಿಂಡರ್ ತೂಕದ ಇಳಿಕೆ ಅನಿವಾರ್ಯವಾಗಿದೆ. 14.2 ಕೆಜಿ ಯಿಂದ 5 ಕೆಜಿವರೆಗೆ ಇಳಿಸುವ ಪ್ರಸ್ತಾಪಗಳಿವೆ. ಶೀಘ್ರದಲ್ಲೇ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.