ಬೆಟ್ಟಂಪಾಡಿ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಶ್ರೀ ರಾಮನಗರ ರೆಂಜ – ಬೆಟ್ಟಂಪಾಡಿ ಇದರ 24ನೇ ವರುಷದ ವಾರ್ಷಿಕೋತ್ಸವದ ಪ್ರಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ (NSS) ಸ್ವಯಂಸೇವಕರಿಂದ ಡಿ.9 ರಂದು ಶ್ರಮದಾನ ನಡೆಯಿತು.
ಈ ಸಂದರ್ಭದಲ್ಲಿ ಗುರುಸ್ವಾಮಿ ಕೃಷ್ಣಪ್ಪ ಗೌಡ , ಕಾಲೇಜು ವಿದ್ಯಾರ್ಥಿಗಳು,ಅಧ್ಯಾಪಕರು, ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಾರ್ಯಕರ್ತರು ಉಪಸ್ಥಿತರಿದ್ದರು.