ಪುತ್ತೂರು: ನಗರ ಸ್ಥಳೀಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಬನ್ನೂರು ಗ್ರಾ.ಪಂ.ನಲ್ಲಿ ಎಲ್ಲಾ ಸದಸ್ಯರು ಮತಚಲಾಯಿಸಿದ್ದು, ಹೀಗಾಗಿ ಬನ್ನೂರು ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.
ಬನ್ನೂರು, ಚಿಕ್ಕಮುಡ್ನೂರು ಹಾಗೂ ಪಡ್ನೂರು ಗ್ರಾಮಗಳ ವ್ಯಾಪ್ತಿಯ ಬನ್ನೂರು ಗ್ರಾ.ಪಂನಲ್ಲಿ ಒಟ್ಟು 13 ಸ್ಥಾನಗಳನ್ನು ಹೊಂದಿದೆ.
ಈ ಎಲ್ಲಾ ಸ್ಥಾನಗಳ ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿರುತ್ತಾರೆ. ಎಲ್ಲಾ 13 ಮಂದಿ ಸದಸ್ಯರು ಮತ ಚಲಾಯಿಸಿದರು.