ಮಂಗಳೂರು: ಯುವತಿ ಪ್ರೀತಿ ನಿರಾಕಣೆ ಮಾಡಿದ್ದಕ್ಕಾಗಿ, ಆಕೆಯ ಪರಿಚಯಸ್ಥ ಯುವಕ ಅತ್ಯಾಚಾರ ಮಾಡಿದ ಘಟನೆ ಬಜ್ಪೆ ಎಂಬಲ್ಲಿ ನಡೆದಿದೆ.
ಈಗಾಗಲೇ ಪೊಲೀಸರು ಆರೋಪಿ ಅಬುಬಕರ್ ಸಿದ್ದಿಕ್ (21) ಎಂಬಾತನನ್ನು ಬಂಧಿಸಿದ್ದಾರೆ.
2019ರಲ್ಲಿ ಯುವತಿ ಹಾಗೂ ಅಬುಬಕರ್ ಸಿದ್ದಿಕ್ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿ ಪರಿಚಯವಾಗಿದ್ದರು. 2019ರಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ಬರು ಜತೆಯಾಗಿ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಮುಂದಿಟ್ಟುಕೊಂಡು ಆರೋಪಿ, ಅಬುಬಕರ್ ಸಿದ್ದಿಕ್ ಯುವತಿಯನ್ನು ಪೀಡಿಸುತ್ತಿದ್ದ. ಪ್ರೀತಿ ಮಾಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವುದಾಗಿ ಬೆದರಿಸಿದ್ದ.
ಯುವತಿ ಡಿ.8 ರಂದು ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಹಿಂಬಾಲಿಸಿಕೊಂಡು ಬಂದು ಆಕೆಯ ಮನೆಗೆ ನುಗ್ಗಿ ಆತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆ ದೂರು ದಾಖಲಾಗಿದೆ.