ವಿಟ್ಲ: ಪಟ್ಟಣ ಪಂಚಾಯತ್ ನ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಡಿ.13 ರಂದು ಪಕ್ಷದ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದರೆ ಬಿಡುಗಡೆಗೊಳಿಸಿದರು.
ಕಳೆದ ಕೆಲವು ದಿನಗಳಿಂದ ಭಾರೀ ಕುತೂಹಲ ಕೆರಳಿಸಿದ್ದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸರಣಿ ಸಭೆಗಳ ಬಳಿಕ, ಅನೇಕ ಜಟಾಪಟಿಗಳ ನಂತರ ಬಿಡುಗಡೆಯಾಗಿದೆ, ಪಟ್ಟಿ ಬಿಡುಗಡೆಯಾದ ಕೂಡಲೇ ಅಸಮಾಧಾನ ಮುಗಿಲೇಳುವ ಲಕ್ಷಣ ಕಾಣಿಸುತ್ತಿದೆ.
ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದ ಹಿರಿಯ ಮುಖಂಡ ಅಶೋಕ್ ಕುಮಾರ್ ಶೆಟ್ಟಿ ಬಿಜೆಪಿಯ ಶಕ್ತಿ ಕೇಂದ್ರದ ಕೆಲ ನಾಯಕರ ವಿರೋಧದ ನಡುವೆಯೂ 14 ಕೂಡೂರು ವಾರ್ಡಿನಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಮಾಜಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಲೋಕನಾಥ ಶೆಟ್ಟಿ ನಿರೀಕ್ಷೆಯಂತೆ ಟಿಕೆಟ್ ವಂಚಿತರಾಗಿದ್ದಾರೆ.
ಪಟ್ಟಣ ಪಂಚಾಯತ್ ನ ಸಕ್ರಿಯ ಯುವ ಸದಸ್ಯ ಶ್ರೀಕೃಷ್ಣ ವಿಟ್ಲ ಇವರಿಗೆ ಕೊನೆ ಕ್ಷಣದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇರ ಸೂಚನೆಯ ಕಾರಣದಿಂದ ಟಿಕೆಟ್ ನಿರಾಕರಣೆ ಆಗಿದೆ. ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ಶಕ್ತಿ ಕೇಂದ್ರ ಪ್ರಮುಖ್ ಹರೀಶ್ ಸಿಎಚ್, ಬಜರಂಗದಳ ಮಾಜಿ ಸಂಚಾಲಕ ಜಯಂತ್ ಸಿಎಚ್, ಸಾಮಾಜಿಕ ಜಾಲತಾಣದ ಕೃಷ್ಣ ಮುದೂರು ಸೇರಿದಂತೆ ಅನೇಕ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಬ್ರಾಹ್ಮಣ ವರ್ಗದ ವ್ಯಕ್ತಿಗೆ ಟಿಕೆಟ್ ಆಸೆ ಹುಟ್ಟಿಸಿ ನಿರಾಕರಿಸಿರುವುದು ಒಟ್ಟಾರೆಯಾಗಿ ಬ್ರಾಹ್ಮಣ ಸಮುದಾಯ ಬಿಜೆಪಿ ವಿರುದ್ಧ ನಿಲ್ಲುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ವಿಟ್ಲದ ರಾಜಕೀಯ ಬಹಳಷ್ಟು ಕುತೂಹಲಕ್ಕೆ ಎಡೆಮಾಡಿದೆ.
ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ… 👇👇👇





























