ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪಿ.ಎಫ್.ಐ. ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ನೂರಾರು ಪಿ.ಎಫ್.ಐ. ಕಾರ್ಯಕರ್ತರು ಡಿ.14ರಂದು ಠಾಣಾ ಮುಂಭಾದಲ್ಲಿ ಪ್ರತಿಭಟನೆ ನಡೆಸಿದ್ರು ಮಾತ್ರವಲ್ಲದೇ, ನಮಾಜನ್ನೂ ಸಹ ಮಾಡಿದ್ರು. ಆ ಬಳಿಕವೂ ಅಲ್ಲಿಂದ ಕದಲದೇ ನ್ಯಾಯಕ್ಕಾಗಿ ಒತ್ತಾಯಿಸಿ ರಾತ್ರಿವರೆಗೂ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಏಕಾಹ ಭಜನಾ ತಂಡವು ಭಜನೆ ಹೇಳುತ್ತಾ ಸಾಗಿದ್ದು ವಿಶೇಷವಾಗಿತ್ತು.
ವಿಡಿಯೋ ನೋಡಿ
ಮಹಾಕಾಳಿ ದೇವಸ್ಥಾನದ ಭಜನಾ ತಂಡವು ಏಕಾಹ ಭಜನಾ ಸಲುವಾಗಿ ಭಜನೆ ನಡೆಸುತ್ತಾ ಸಾಗುತ್ತಿದ್ದು, ಪ್ರತಿಭಟನೆಯ ನಡುವಿನಲ್ಲೇ ಸಾಗಿದ ಏಕಾಹ ಭಜನಾ ತಂಡವನ್ನು ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರು ವೀಕ್ಷಣೆ ಮಾಡುತ್ತ ನಿಂತಿದ್ದು, ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಗುವಿನ ವಾತಾವರಣ ಸ್ವಲ್ಪ ಸಡಿಲುವಾಗಿತ್ತು ಎನ್ನಲಾಗಿದೆ.