ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟ್ರಾರ್ ವಿಟ್ಲ ಇದರ ಕಲ್ಲಡ್ಕ ವಲಯದ ಪದಗ್ರಹಣದ ಪ್ರಯುಕ್ತ ವೀರಕಂಭ ಒಕ್ಕೂಟದ ಸದಸ್ಯರಿಗೆ ಆಟೋಟ ಸ್ಪರ್ಧೆ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ನಡೆಯಿತು.
ಆಟೋಟ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ವೀರಕಂಭ ಒಕ್ಕೂಟದ ಅಧ್ಯಕ್ಷೆ ಶಾಂಭವಿ ಆಚಾರ್ಯ ಇವರ ಅದ್ಯಕ್ಷತೆಯಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಾ ಶೆಟ್ಟಿ ರವರು ದೀಪ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಯೋಜನೆಯ ಎಲ್ಲಾ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸುವ ಸಲುವಾಗಿ ಅತ್ಯಂತ ಸುಲಭಕರ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸದಸ್ಯರೆಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಸದಸ್ಯರಾದ ಮೀನಾಕ್ಷಿ ಸುನಿಲ್, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆಯ ಜತೆ ಕಾರ್ಯದರ್ಶಿ ಚಿನ್ನ ಮೈರ, ವೀರಕಂಭ ಒಕ್ಕೂಟದ ಉಪಾಧ್ಯಕ್ಷ ಹರೀಶ್ ಬಂಗೇರ, ಕಾರ್ಯದರ್ಶಿ ಪದ್ಮಾವತಿ, ಜೊತೆ ಕಾರ್ಯದರ್ಶಿ ಆನಂದ, ಕೋಶಾಧಿಕಾರಿ ಪ್ರೇಮಾ ಆಚಾರ್ಯ, ಸೇವಾ ಪ್ರತಿನಿಧಿ ರೇವತಿ, ಹಾಗೂ ವೀರಕಂಭ ಒಕ್ಕೂಟದ ಸ್ವಸಹಾಯ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಯ ಮೊದಲು ವೀರಕಂಭ ಒಕ್ಕೂಟದ ಸುವಿಧಾ ಕಚೇರಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.