ಪುತ್ತೂರು: ಮಹಿಳೆಯೊಬ್ಬರು ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ಕಿರುಚಾಡಿ ಗಲಭೆ ಸೃಷ್ಟಿಸಿದ ಘಟನೆ ಪುತ್ತೂರು ಮುಖ್ಯ ರಸ್ತೆಯ ಸಿಟಿ ಸೆಂಟರ್ ಬಳಿ ನಡೆದಿದೆ.
ಕಂಠ ಪೂರ್ತಿ ಮಹಿಳೆಯೊಬ್ಬರು ರಸ್ತೆ ಬದಿ ನಿಂತು ಕಿರುಚಾಡುತ್ತ, ಗಲಭೆ ಸೃಷ್ಟಿಸಿದ್ದು, ಇದರಿಂದಾಗಿ ಕೆಲ ಕಾಲ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಈ ಬಗ್ಗೆ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಮಹಿಳೆ ಪೊಲೀಸರ ಮಾತಿಗೂ ಜಗ್ಗದ ಮಹಿಳೆ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ಬೈದು ಅಲ್ಲಿಂದ ಓಡಿ ಪರಾರಿಯಾಗಿದ್ದಾಳೆ ಎನ್ನಲಾಗಿದೆ.
ಸ್ಥಳದಲ್ಲಿ ಹಲವಾರು ಜನ ಜಮಾಯಿಸಿದ್ದು, ಇದರಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಸಂಭವಿಸಿದ್ದು, ಪೊಲೀಸರು ಆಗಮಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.
ಕೆಲ ಸಮಯಗಳಿಂದ ಆ ಮಹಿಳೆ ಕಂಠ ಪೂರ್ತಿ ಕುಡಿದು ಈ ರೀತಿಯಾಗಿ ವರ್ತಿಸುತ್ತಿದ್ದಾಳೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.