ವಿಟ್ಲ: ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ವ್ಯಕ್ತಿಯೋರ್ವ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ಠಾಣೆಗೆ ದೂರು ನೀಡಿದ ಘಟನೆ ವಿಟ್ಲದಲ್ಲಿ ನಡೆದಿದೆ.
ರಾಧುಕಟ್ಟೆ ನಿವಾಸಿ ಜಯ ಕೊಟ್ಟಾರಿ ದೂರುದಾರರು.
ಜಯ ಕೊಟ್ಟಾರಿ ರವರು ಮೋಟಾರು ಸೈಕಲ್ ನಲ್ಲಿ ಕೇಪು ಕಡೆಗೆ ಹೊರಡುವಷ್ಟರಲ್ಲಿ ಅಲ್ಲಿಗೆ ಬಂದ ಪವನ್ ಎಂಬಾತ ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ, ನನ್ನ ಬಗ್ಗೆ ಅಪಪ್ರಚಾರ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ. 166/2021 ಕಲಂ 341,323,504,506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.