ರ್ವೇ ಸೆಟಲ್ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ (Survey Settlement and Land Records Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3000 ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ (Licensed Landlords) ಹುದ್ದೆಗಳು ಖಾಲಿ ಇದ್ದು, ಪಿಯುಸಿ, ಡಿಪ್ಲೋಮಾ, ಬಿಇ, ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿ.31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಈ ಎಲ್ಲದರ ಕುರಿತಾದ ಮಾಹಿತಿ ಇಲ್ಲಿದೆ ..
- ಸಂಸ್ಥೆ – ಸರ್ವೇ ಸೆಟಲ್ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ
- ಹುದ್ದೆಯ ಹೆಸರು – ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್
- ಒಟ್ಟು ಹುದ್ದೆಗಳು – 3000
- ಉದ್ಯೋಗದ ಸ್ಥಳ – ಕರ್ನಾಟಕ
- ವೇತನ – ನಿಯಮಾನುಸಾರ
- ಅರ್ಜಿ ಸಲ್ಲಿಕೆ ವಿಧಾನ – ಆನ್ಲೈನ್
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 1/12/2021
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31/12/2021
ವಿದ್ಯಾರ್ಹತೆ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್, ಐಟಿಐ ಪೂರ್ಣಗೊಳಿಸಿರಬೇಕು.
ಅನುಭವ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಭೂ ಮಾಪನ ಕಂದಾಯ ವ್ಯವಸ್ಥೆಯಲ್ಲಿ ಮತ್ತು ಭೂ ದಾಖಲೆಗಳ ಇಲಾಖೆಗಳಲ್ಲಿ ಅಥವಾ ಭಾರತೀಯ ಸಮೀಕ್ಷೆ ಅಥವಾ ಸರ್ಕಾರಿ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
ಇತರೆ ಶುಲ್ಕ:
ಟ್ರೇನಿಂಗ್ ಶುಲ್ಕ-5,000 ರೂ.
ಲೈಸೆನ್ಸ್ ಶುಲ್ಕ-3,000 ರೂ.
ವಯೋಮಿತಿ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-65 ವರ್ಷದೊಳಗಿರಬೇಕು.
ವೇತನ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1,000 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಆನ್ಲೈನ್ ಟೆಸ್ಟ್, ಲಿಖಿತ ಪರೀಕ್ಷೆ