ಪುತ್ತೂರು: ರಾಜ್ಯದ ಹಲವು ಕಡೆ ಗಲಭೆ, ದೊಂಬಿ, ಕೊಲೆ, ಕೊಲೆ ಯತ್ನ ನಡೆಸಿರುವಂತಹ ಹಾಗೂ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇರುವಂತಹ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಕೊಲೆ ಯತ್ನ ಪ್ರಕರಣದ ಆರೋಪಿಗಳ ಪರವಾಗಿ ಪ್ರತಿಭಟನೆ ಹೆಸರಿನಲ್ಲಿ ದೊಂಬಿ ನಡೆಸಿ ಪೊಲೀಸರ ಕೊಲೆ ಯತ್ನ ನಡೆಸಿರುವಂತಹ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ರವರಿಗೆ ಮನವಿ ಸಲ್ಲಿಸಲಾಯಿತು.
ಉಪ್ಪಿನಂಗಡಿ ಠಾಣೆ ಮೇಲೆ ದಾಳಿ ಮಾಡಿದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತ್ತಡ್ಕ, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೇಶ್ ಬಲ್ಲಾಡ್, ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ ಕುಂಜೂರುಪಂಜ, ಬಜರಂಗದಳಪ್ರಮುಖ್ ಮಿಥುನ್ ಕಲ್ಲಡ್ಕ, ಉಪ್ಪಿನಂಗಡಿ ಬಜರಂಗದಳಸಂಚಾಲಕ ರವಿನಂದನ್ ನಟ್ಟಿಬೈಲು, ಪ್ರಮುಖರಾದ ರವಿಇಳಂತಿಲ, ರಾಮ್ ಪ್ರಸಾದ್ ಮಯ್ಯ ಉಪಸ್ಥಿತರಿದ್ದರು.