ಪುತ್ತೂರು: ರಿಕ್ಷಾ ಮತ್ತು ಆಕ್ಟಿವಾ ನಡುವೆ ಅಪಘಾತ ನಡೆದು ಇಬ್ಬರು ಗಂಭೀರ ಗಾಯಗೊಂಡ ಘಟನೆ ನರಿಮೊಗರು ಸಮೀಪ ಡಿ. 27 ರಂದು ಮಧ್ಯರಾತ್ರಿ ನಡೆದಿದೆ.
ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ತಂತ್ರಿಯವರ ಸಹಾಯಕರಾಗಿದ್ದ ಮಧುಸೂದನ್ ಚಡಗ ಅವರು ಮಧ್ಯರಾತ್ರಿ ದೇವಸ್ಥಾನದಿಂದ ಅವರ ಮನೆ ಆರ್ಯಾಪು ಕಡೆ ಆಕ್ಟಿವಾದಲ್ಲಿ ಹೋಗುತ್ತಿದ್ದ ವೇಳೆ ಸಂಪ್ಯದಿಂದ ಭಕ್ತಕೋಡಿಗೆ ಹೋಗುತಿದ್ದ ರಝಾಕ್ ಹಾಗೂ ಅವರ ಕುಟುಂಬವಿದ್ದ ರಿಕ್ಷಾದ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಿಂದಾಗಿ ಮಧುಸೂದನ್ ಗಂಭೀರ ಗಾಯಗೊಂಡಿದ್ದು, ರಿಕ್ಷಾ ಚಾಲಕ ರಝಾಕ್ ಕೂಡ ಗಾಯಗೊಂಡಿದ್ದು, ಕೂಡಲೇ ಸ್ಪಂದಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಧುಸೂದನ್ ಹಾಗೂ ರಝಾಕ್ ಇಬ್ಬರನ್ನೂ ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಿದರು ಎಂದು ತಿಳಿದು ಬಂದಿದೆ.
ಮಧುಸೂದನ್ ರವರ ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.





























