ಪುತ್ತೂರು: ನಾಯಿಯಿದೆ ಎಚ್ಚರಿಕೆ ಎನ್ನುವಂತಹ ಬೋರ್ಡ್ ಅಥವಾ ಬ್ಯಾನರ್ ಅನ್ನು ಸಾಮಾನ್ಯವಾಗಿ ನಾವು ಎಲ್ಲಾ ಕಡೆಗಳಲ್ಲೂ ಕಾಣಬಹುದು.. ಆದರೇ ಈ ಪರಿಸರದಲ್ಲೊಂದು ಬೇರೆಯದೇ ರೀತಿಯ ಬ್ಯಾನರ್ ಅನ್ನು ಕಾಣಬಹುದಾಗಿದೆ..
ಹೌದು.. ಪುತ್ತೂರು ತಾಲೂಕಿನ ಕಲ್ಲಾರೆ ಸಾಮೆತ್ತಡ್ಕ ರಸ್ತೆಯಲ್ಲಿ ಇಂತಹದೊಂದು ಬ್ಯಾನರ್ ಅಳವಡಿಸಿದ್ದು, ಅದರಲ್ಲಿ “ಇಲ್ಲಿ ನಾಯಿ ಬಿಟ್ಟು ಹೋದವರ ಆತ್ಮಕ್ಕೆ ಶಾಂತಿ ಸಿಗಲಿ”, ‘ಇಂತಿ ನಿಮ್ಮ ನಾಯಿ ಮರಿ‘ ಎಂದು ಬರೆದಿದ್ದು, ಬೀದಿ ಬದಿಯಲ್ಲಿ ನಾಯಿ ಅಥವಾ ನಾಯಿ ಮರಿಗಳನ್ನು ಬಿಟ್ಟು ಹೋಗುವವರಿಗೆ ಇದೊಂದು ಎಚ್ಚರಿಕೆಯ ಪಾಠವಾಗಿದೆ.
ಬೀದಿಗಳಲ್ಲಿ ನಾಯಿಗಳನ್ನು ಬಿಟ್ಟರೇ ಅದು ಆಹಾರಕ್ಕಾಗಿ ಪಡುವ ಕಷ್ಟ ನೋಡಿದವರ ಕಣ್ಣಲ್ಲಿ ನೀರು ಬರುವಂತಿರುತ್ತದೆ ಮತ್ತು ದಾರಿಯಲ್ಲಿ ಹೋಗುವ ವಾಹನಗಳಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತವೆ.
ಇನ್ನು ಇಲ್ಲಿ ಈ ಹಿಂದೆಯೂ ನಾಯಿಗಳನ್ನು ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ನಾಯಿಗಳನ್ನು ಸಾಕಲು ಆಗದವರು ಅದನ್ನು ಬೀದಿಗಳಲ್ಲಿ ಬಿಡುವ ಬದಲು ಕೆಲ ಕಡೆಗಳಲ್ಲಿ ಇಂತಹ ನಾಯಿಗಳನ್ನು ಪಾಲನೆ ಪೋಷಣೆ ಮಾಡುವಂತಹ ಜಾಗಗಳಿದ್ದು, ಇಂತಹದೊಂದು ಜಾಗ ಮಂಗಳೂರಿನಲ್ಲೂಯಿದೆ ಅಲ್ಲಿ ಅದನ್ನು ಬಿಟ್ಟು ಬಂದರೆ ನಾಯಿಗಳು ಯಾವುದೇ ತೊಂದರೆಯಿಲ್ಲದೆ ಇರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಎಲ್ಲರ ಮನೆಯಗಳಲ್ಲೂ ನಾಯಿಗಳನ್ನು ಬಲು ಪ್ರೀತಿಯಿಂದ ಸಾಕುತ್ತಾರೆ, ಕೃಷಿಕರ ಮನೆಯಲ್ಲಂತು ಮೂರು, ನಾಲ್ಕು ನಾಯಿಗಳು ಕಂಡು ಬರುತ್ತವೆ.. ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಎನ್ನುವ ವಾಡಿಕೆಯಿದೆ ಆದರೇ ಅಂತಹ ನಾಯಿಗಳನ್ನು ಬೀದಿಗಳಲ್ಲಿ ಬಿಟ್ಟು ಅಮಾನವೀಯತೆಯನ್ನು ಮೆರೆಯುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಈ ಬ್ಯಾನರ್ ನಾಯಿ ಅಥವಾ ನಾಯಿ ಮರಿಗಳನ್ನು ಬೀದಿಗಳಲ್ಲಿ ಬಿಟ್ಟು ಹೋಗುವವರಿಗೆ ಹಾಕಿಸಲಾಗಿದ್ದು, ಇನ್ನೂ ಈ ರೀತಿ ಮಾಡದಂತೆ ಎಚ್ಚರಿಕೆಯ ಸಂದೇಶವಾಗಿದೆ.