ಕುಂದಾಪುರ: ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ಯುವತಿಗೆ ಚೂರಿಯಿಂದ ಇರಿದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಿಯಾರ ಹೆಸ್ಕುತ್ತೂರಿನಲ್ಲಿ ಡಿ.29 ರಂದು ನಡೆದಿದೆ.
ಸ್ಥಳೀಯ ನಿವಾಸಿ ರಿಕ್ಷಾ ಚಾಲಕನಾಗಿರುವ ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ (35) ಚೂರಿ ಇರಿದು ಕೊಲೆಗೆ ಯತ್ನಿಸಿ ಬಳಿಕ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ.
ಈತ ಶಿರಿಯಾರದ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯಲ್ಲಿ ತನ್ನನ್ನು ಪ್ರೀತಿಸುವಂತೆ ಹಲವು ಬಾರಿ ಆಕೆಯಲ್ಲಿ ನಿವೇದಿಸಿಕೊಂಡಿದ್ದ. ಈತ ತನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಯುವತಿ ಈತನ ಪ್ರೀತಿಗೆ ಒಪ್ಪಿಗೆ ಕೊಡಲಿಲ್ಲ ಎಂದು ಹೇಳಲಾಗುತ್ತಿದೆ.
ಇದರಿಂದ ಮನನೊಂದ ಈತ ಆಕೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಬಳಿಕ ಆತ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಡಿ.30 ರಂದು ಆಕೆ ಊಟಕ್ಕೆಂದು ಮಳಿಗೆಯಿಂದ ಹೊರಬಂದಿದ್ದಾಗ ಹಿಂಬಾಲಿಸಿದ ಈತ ಶಿರಿಯಾರದ ರಾಮಮಂದಿರ ಬಳಿ ಯುವತಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನಂತರ ರಾಘವೇಂದ್ರನ ಶವ ಸಮೀಪದ ಹಾಡಿಯಲ್ಲಿ ಕಂಡುಬಂದಿದೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.