ಕಾಣಿಯೂರು: ಯುವಕನೋರ್ವ ತನ್ನ ಕೃಷಿ ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕ ಕಾಲು ಜಾರಿ ಕೆರೆ ಬಿದ್ದು ಮೃತಪಟ್ಟ ಘಟನೆ ಕಾಣಿಯೂರು ಸಮೀಪದ ಪುಣ್ಚತ್ತಾರು ಎಂಬಲ್ಲಿ ನಡೆದಿದೆ.
ಮೃತರನ್ನು ಕಾಣಿಯೂರು ಸಮೀಪದ ಪುಣ್ಚತ್ತಾರು ನಿವಾಸಿ ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್ (29) ಎನ್ನಲಾಗಿದೆ.
ಪುಣ್ಚತ್ತಾರು ಬೆಂಗಡ್ಕ ಎಂಬಲ್ಲಿ ವ್ಯಕ್ತಿಯೋರ್ವರ ಚಪ್ಪಲಿ ಕೆರೆಯಲ್ಲಿ ಪತ್ತೆಯಾದ ಹಿನ್ನಲೆ, ಕೆರೆಗೆ ಬಿದ್ದಿರುವ ಶಂಕೆಯಲ್ಲಿ ಅಗ್ನಿಶಾಮಕದಳದವರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿ ನೀಡಿದ್ದಾರೆ.