ಸುಳ್ಯ: ರಸ್ತೆ ಬದಿ ಸರಕಾರದ ವತಿಯಿಂದ ಅಳವಡಿಸಿದ್ದ ಸೋಲಾರ್ ದೀಪದ ಕಂಬಗಳನ್ನು ಹಾನಿಗೊಳಿಸಿ ಪ್ಯಾನಲ್ ಹಾಗೂ ಬ್ಯಾಟರಿಗಳನ್ನು ಕದ್ದೊಯ್ದ ಘಟನೆ ಸವಣೂರು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.
ಸವಣೂರು ಗ್ರಾಮ ಪಂಚಾಯತು ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಸಾರಡ್ಕ, ಅಸಂತಡ್ಕ, ಉಪ್ಪೊಳಿಗೆ, ಪಾದೆಮೇಲು ಎಂಬ ಸ್ಥಳಗಳಲ್ಲಿ 15ನೇ ಹಣಕಾಸು ಅನುದಾನದಲ್ಲಿ ಸೋಲಾರ್ ದೀಪವನ್ನು 2021-22 ನೇ ಸಾಲಿನಲ್ಲಿ ಅಳವಡಿಸಲಾಗಿತ್ತು.
ಡಿ.27 ರಂದು ರಾತ್ರಿ ವೇಳೆ ಈ ಸ್ಥಳಗಳಲ್ಲಿ ಅಳವಡಿಸಲಾದ ಸೋಲಾರ್ ದೀಪದ ಕಂಬಗಳಿಗೆ ಕಳ್ಳರು ಹಾನಿಮಾಡಿದ್ದಾರೆ. ನಂತರ ಅದರ 4 ಪ್ಯಾನಲ್ ಗಳು ಹಾಗೂ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ ರೂ 1,00,000 ಆಗಬಹುದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಪಂಚಾಯತ್ ಪಿಡಿಒ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.