ಪುತ್ತೂರು: ಅಪಘಾತದಿಂದಾಗಿ ಗಾಯಗೊಂಡ ದನವನ್ನು ಆರೈಕೆ ಮಾಡಿ, ರಕ್ಷಣೆ ಮಾಡುವ ಮೂಲಕ ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.
ಡಿ.29 ರಾತ್ರಿ ಅಲಂಕಾರು- ಕುದ್ಮಾರು ರಸ್ತೆಯ ಶಾಂತಿಮೊಗರು ದೇವಸ್ಥಾನದ ಬಳಿ ಅಪಘಾತವಾಗಿ ದನದ ಕೈ ಕಟ್ ಆಗಿದ್ದು,ವಿಷಯ ತಿಳಿದ ತಕ್ಷಣ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಕುದ್ಮಾರು ಘಟಕದ ಮತ್ತು ಬಜರಂಗದಳ ಬೆಳಂದೂರು ಘಟಕದ ಕಾರ್ಯಕರ್ತರು ಹಾಗೂ ಸ್ಥಳೀಯರು ಸೇರಿ ದನವನ್ನು ಶಾಂತಿಮೊಗರು ದೇವಸ್ಥಾನದಲ್ಲಿ ಕಟ್ಟಿ ಹಾಕಿದ್ದು, ಇಂದು ಡಾಕ್ಟರ್ ಅನ್ನು ಕರೆ ತಂದು ಪ್ರಥಮ ಚಿಕಿತ್ಸೆ ಮಾಡಿ ನಂತರ ಹಳ್ಳಿ ಮದ್ದು ಹಾಕಿ ದನವನ್ನು ರಕ್ಷಣೆ ಮಾಡಿದರು ಎಂದು ತಿಳಿದು ಬಂದಿದೆ.