ಪುತ್ತೂರು: ರಸ್ತೆ ಬದಿಯಲ್ಲಿರುವ ಮೋರಿಯ ಮೇಲೆ ಸ್ಲಾಬ್ ಇಲ್ಲದ ಕಾರಣ ಕಾರೊಂದು ಗುಂಡಿಗೆ ಬಿದ್ದ ಘಟನೆ ಮುಖ್ಯರಸ್ತೆಯಿಂದ ಪಾಂಗ್ಲಾಯಿ ಕಲ್ಲಿಮಾರ್ ಹೋಗುವ ರಸ್ತೆಯಲ್ಲಿ ಡಿ.31 ರಂದು ನಡೆದಿದೆ.
ರಸ್ತೆ ಬದಿಯಲ್ಲಿರುವ ಮೋರಿಯ ಮೇಲಿನ ಸ್ಲಾಬ್ ಇಲ್ಲದ ಕಾರಣ ಕಾರಿನ ಚಕ್ರವೊಂದು ಗುಂಡಿಗೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಸಾರ್ವಜನಿಕರು ಹರಸಾಹಸ ಪಟ್ಟರು ಎನ್ನಲಾಗಿದೆ.
ಈ ಮೊದಲು ಈ ರಸ್ತೆಯಲ್ಲಿ ಹಲವಾರು ವಾಹನಗಳು ಈ ರೀತಿಯಾಗಿ ವಾಹನಗಳು ಗುಂಡಿಗೆ ಬಿದ್ದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ ಹಾಗೂ ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸ್ಲಾಬ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹಲವು ವಾಹನಗಳು ಗುಂಡಿಗೆ ಬಿದ್ದು ತೊಂದರೆಯಾಗದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರು ಕಲ್ಲುಗಳನ್ನಿಟ್ಟು ಅಡ್ಡಗಟ್ಟಿದ್ದಾರೆ.






























