ವಿಟ್ಲ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುಣಚ ನಿವಾಸಿ ಪ್ರದೀಪ್ ಕುಲಾಲ್(25) ರವರು ಜ.5 ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರದೀಪ್ ರವರು ಮೂಲತಃ ವಿಟ್ಲ ನೆತ್ತರೆಕೆರೆ ನಿವಾಸಿಯಾಗಿದ್ದು, ಪ್ರಸ್ತುತ ಪುಣಚದಲ್ಲಿ ವಾಸವಾಗಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರೈಸಿ, ಬೆಂಗಳೂರಿನ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಉದ್ಯೋಗದಲ್ಲಿದ್ದರು.
ಮೃತರು ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.