ಮಂಗಳೂರು: ಶಕ್ತಿನಗರದಲ್ಲಿರುವ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಕನ್ನಡ ಬೋರ್ಡ್ ಗಳಿಲ್ಲ ಹಾಗೂ ಕೆಲ ಉಪನ್ಯಾಸಕರು ಮಲಯಾಳಂ ಉಪನ್ಯಾಸ ಕೊಡುತ್ತಾರೆ ಎಂದು ದೂರು ಬಂದ ಹಿನ್ನೆಲೆ ಕನ್ನಡ ಸೇನೆ ಪ್ರಮುಖರು ಕಾಲೇಜಿಗೆ ಭೇಟಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಶಕ್ತಿನಗರದಲ್ಲಿರುವ ಹೀರ ಇಂಟರ್ನ್ಯಾಷನಲ್ ಸ್ಕೂಲ್ ಗೆ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಯಾವುದೇ ಕನ್ನಡದ ಬೋರ್ಡ್ ಇಲ್ಲ ಮತ್ತು ಕೆಲವು ಉಪನ್ಯಾಸಕರು ಮಲಯಾಳಂನಲ್ಲಿ ಉಪನ್ಯಾಸ ಕೊಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ ಮಲಯಾಳಂ ಅರ್ಥವಾಗುವುದಿಲ್ಲ ಎಂದು ಕೆಲವರು ದೂರು ನೀಡಿದ್ದರು.
ಕನ್ನಡ ಸೇನೆಯು ಕಾಲೇಜಿನ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿ ಕಾಲೇಜಿನಲ್ಲಿ 7 ದಿನಗಳೊಳಗೆ ಕನ್ನಡ ಬೋರ್ಡ್ ಹಾಕಬೇಕು ಮತ್ತು ಮಲಯಾಳಂ ನಲ್ಲಿ ಬೋಧನೆ ಮಾಡಕೂಡದು ಒಂದು ವೇಳೆ 7 ದಿನಗಳಲ್ಲಿ ಮಾಡದಿದ್ದರೆ ಕಾಲೇಜಿನ ಮುಂಭಾಗ ಉಗ್ರ ಹೋರಾಟ ಮಾಡಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ,ಕಾರ್ಯಧ್ಯಕ್ಷ ಗುರುಚಂದ್ರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಕೇಶವ ಮತ್ತು ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ಗುರುಪ್ರಸಾದ್ ಶೆಟ್ಟಿ, ಕೃಷ್ಣ, ಮೊಕ ಬಸವರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.