ಪುತ್ತೂರು: ಗ್ರಾಮಾಂತರ ಮಂಡಲ ಎಸ್.ಟಿ. ಮೋರ್ಚಾದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅನ್ನಮೂಲೆ ರವರ ತಾಯಿ ರಜನಿ(62) ಅನಾರೋಗ್ಯದಿಂದಾಗಿ ಜ.5 ರಂದು ನಿಧನರಾದರು.
ರಜನಿ ರವರು ಅನ್ನಪೂರ್ಣೇಶ್ವರಿ ಸೇವಾ ಸಮಿತಿ ಹಾಗೂ ಇನ್ನಿತರ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತಿ ಜಾರಪ್ಪ ನಾಯ್ಕ್, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಎಸ್.ಟಿ. ಮೋರ್ಚಾದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅನ್ನಮೂಲೆ ಸಹಿತ ಇಬ್ಬರು ಪುತ್ರರು, ಹಾಗೂ ಪುತ್ರಿಯನ್ನು ಅಗಲಿದ್ದಾರೆ.