ಉಪ್ಪಿನಂಗಡಿ: ಕೆಲ ದಿನಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಗೇಟು ಮೀನಿನ ಅಂಗಡಿ ಬಳಿ ಮೂವರಿಗೆ ಹಲ್ಲೆಗೈದ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ತಣ್ಣೀರು ಪಂತ್ ಕುಪ್ಪೆಟ್ಟಿ ಬೈತಾರು ನಿವಾಸಿ ಸರ್ಪುದ್ದಿನ(31), ಕಡಬ ತಾಲೂಕು ಕೊಣಾಲು ಕೋಲ್ಪೆ ಕೊಳಂಬೆ ನಿವಾಸಿ ಮೊಹಮ್ಮದ್ ಇರ್ಫಾನ್(24) ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಆರೋಪಿಗಳು ಮುಸುಕು ಧರಿಸಿ ಹಳೆಗೇಟು ಮೀನಿನ ಅಂಗಡಿ ಬಳಿ ಮೂವರಿಗೆ ಹಲ್ಲೆಗೈದು ಪರಾರಿಯಾಗಿದ್ದರು.
ಈ ಬಗ್ಗೆ ಠಾಣೆಯಲ್ಲಿ ಅಕ್ರ:152/2021 ಕಲಂ 143,147,148,324,326,120(B),307 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.