ವಿಟ್ಲ: ಸಾಲೆತ್ತೂರು ಎಂಬಲ್ಲಿ ಮದುವೆ ಮನೆಯಲ್ಲಿ ಮದುಮಗನಿಗೆ ಕೊರಗಜ್ಜನ ವೇಷ ಧರಿಸಿ ಅಪಹಾಸ್ಯ ಮಾಡಿರುವುದನ್ನು ಪುತ್ತೂರು ಕಾಂಗ್ರೆಸ್ ಎಸ್ಸಿ ಘಟಕ ತೀವ್ರವಾಗಿ ಖಂಡಿಸಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಧರ್ಮದ ಜನರು ನಂಬಿಕೊಂಡು ಬಂದಿರುವ ಸ್ವಾಮಿ ಕೊರಗಜ್ಜ ದೈವವನ್ನು ಅಪಹಾಸ್ಯ ಮಾಡಿರುವುದು ಅಪಾರ ಭಕ್ತ ವೃಂದಕ್ಕೆ ನೋವುಂಟಾಗಿದೆ, ಪೋಲೀಸ್ ಇಲಾಖೆಯು ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪುತ್ತೂರು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್ ರವರು ಆಗ್ರಹಿಸಿದ್ದಾರೆ.