ಪುತ್ತೂರು: ವಿಟ್ಲದಲ್ಲಿ ಕೇಂದ್ರ ಕಛೇರಿ ಹೊಂದಿರುವ ದಕ ಜಿಲ್ಲೆಯಲ್ಲಿ ತೆಂಗು ಕೃಷಿಕರಿಗೆಂದೇ ಹುಟ್ಟಿಕೊಂಡ ದಕ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧಿಕೃತ ವೆಬ್ಸೈಟ್‌ನ ಬಿಡುಗಡೆಯನ್ನು ನೆಟ್ಟಣ ಕಿದು ಸಿಪಿಸಿಆರ್‌ಐನಲ್ಲಿ ನಡೆದ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ನಡೆಸಲಾಯಿತು.
ಭಾರತ ಸರಕಾರದ ಸಂಸ್ಥೆಯಾದ ICAR-CPCRI ಇದರ ಮುಖ್ಯಸ್ಥ ಅನಿತಾ ಕರುಣ್ ವೆಬ್‌ಸೈಟ್ ಬಿಡುಗಡೆ ಗೊಳಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವಿಜ್ಞಾನಿಗಳಾದ ಡಾ.ಯದುಕುಮಾರ್, ಡಾ. ದಿವಾಕರ್, ಡಾ.ಹೆಬ್ಬಾರ್, ಡಾ. ನಾಗರಾಜ್, ಡಾ. ನಿರಾಲ್, ತೆಂಗು ರೈತ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸಿಬಂದಿ ವರ್ಗದವರು, ರೈತರು ಮತ್ತು ವಿಟ್ಲ ಕಾಸರಗೋಡು ಕಿದು ಸಿಪಿಸಿಆರ್‌ಐನ ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈಗಾಗಲೇ ದ.ಕ ಜಿಲ್ಲಾ ತೆಂಗು ರೈತ ಸಂಸ್ಥೆಯಿಂದ ಸುಳ್ಯ ತಾಲೂಕಿನಲ್ಲಿ ಮಾಹಿತಿ ಕಛೇರಿ ತೆರೆದಿದ್ದು ಅತೀ ಶೀಘ್ರದಲ್ಲಿ 4 ಜಿಲ್ಲೆಗಳಲ್ಲಿ ಕಛೇರಿಯನ್ನು ತೆರೆಯಲಿದೆ. ಇದರ ವೆಬ್ಸೈಟ್ www.coconutfarmers.in ಇದಾಗಿದೆ.