ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತ ವಿಟ್ಲದ ಸಾಲೆತ್ತೂರ್ ಎಂಬಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಗೋದ್ರಾ ಷಡ್ಯಂತ್ರದ ನಂತರ ನಡೆದ ಗುಜರಾತ್ ಗಲಭೆ ಮಂಗಳೂರಿನಲ್ಲಿ ನಡೆಸಬೇಕು ಆಗಷ್ಟೇ ಮುಸ್ಲಿಮರು ಸುಮ್ಮನಾಗುತ್ತಾರೆ. ಗುಜರಾತ್ ಗಲಭೆ ಯಾವಾಗ ಹೇಗೆ ನಡೆಯಿತೆಂದು ಮುಸ್ಲಿಮರು ಯೋಚಿಸುದು ಒಳಿತು ಎಂದು ಕೋಮುದ್ವೆಷ ಹರಡುವ ಸಂದೇಶ ನೀಡಿದ್ದಾರೆಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ವತಿಯಿಂದ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ನ ಮುಖಂಡರು ಉಪಸ್ಥಿತರಿದ್ದರು.



























