ಪುತ್ತೂರು: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಉಪ್ಪಿನಂಗಡಿ ಸಮೀಪದ ಪುತ್ತಿಲ ಗ್ರಾಮದ ಮಹಿಳೆಯೊಬ್ಬರು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕಳಂಜಿಬೈಲ್ ನಿವಾಸಿ ರಜಾಕ್ ಎಂಬವರ ಪುತ್ರ ನಾಸೀರ್ ಅಲಿಯಾಸ್ ಸುನಾಮಿ ನಾಸೀರ್ ಎಂದು ಗುರುತಿಸಲಾಗಿದೆ.
ಜ.06 ರಂದು ದೂರುದಾರ ಮಹಿಳೆಯ ಅಪ್ರಾಪ್ತ ಮಗಳು ಮನೆಯ ಹೊರಗೆ ನಿಂತುಕೊಂಡಿದ್ದ ವೇಳೆ ಆರೋಪಿ ನಾಸೀರ್ ಆಕೆಯ ಬಳಿ ಬಂದು 500 ರೂಪಾಯಿ ನೋಟು ಹಾಗೂ ಮೊಬೈಲ್ ನೀಡಿ ಆಕೆಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ದೂರುದಾರ ಮಹಿಳೆ ಅಲ್ಲಿಗೆ ಬಂದಾಗ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಗಳನ್ನು ಮದುವೆ ಮಾಡಿಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ವೇಳೆ ದೂರುದಾರ ಮಹಿಳೆ ಕಿರುಚಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ದೂರುದಾರ ಮಹಿಳೆ ಬಾತ್ ರೂಮ್ ಗೆ ಹೋಗಿದ್ದು, ಈ ವೇಳೆ ಬಾತ್ ರೂಮ್ ನ ಕಿಟಕಿಯಿಂದ ಯಾರೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ದೂರುದಾರ ಮಹಿಳೆ ಕಿರುಚಿದ್ದು, ಆಗ ಮರೆಯಲ್ಲಿ ನಿಂತಿದ್ದ ಆರೋಪಿ ನಾಸಿರ್ ಮಹಿಳೆಯ ಮುಂದೆಯೇ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಹಾಗೂ ಅಪ್ರಾಪ್ತ ಬಾಲಕಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ಆರೋಪಿಯ ವಿರುದ್ದ ಐಪಿಸಿ 1860 ರಂತೆ (U/s 354, 504,506 ರಂತೆ ಹಾಗೂ 2012 (U/s 8) ರ ಅನ್ವಯ ಪೊಕ್ಸೊ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.


























