ಮೈಸೂರು: ಸೋಮನ ಹಳ್ಳಿ ಸಮೀಪ ಎರಡು ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅಣ್ಣ ಮೃತಪಟ್ಟ ಸುದ್ದಿ ತಿಳಿದು ಮನೆಯಲ್ಲಿದ್ದ ತಂಗಿಯೂ ಸಾವನ್ನಪ್ಪಿದ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.
ವಿಜಯವಾಣಿ ಪತ್ರಿಕೆ ಪ್ರತಿನಿಧಿ ಚಲುವರಾಜು ರವರ ಪುತ್ರ ಕೀರ್ತಿರಾಜ್(39) ಮತ್ತು ಚಲುವರಾಜು ಅವರ ತಮ್ಮನ ಮಗಳು ರಶ್ಮಿ(21) ಸಾವಿನಲ್ಲಿಯೂ ಒಂದಾದ ಅಣ್ಣ-ತಂಗಿ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಕೀರ್ತಿ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿ, ಇನ್ನುಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅಣ್ಣ ಕೀರ್ತಿರಾಜ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದ ವಿಷಯ ತಿಳಿದ ಸಹೋದರಿ ರಶ್ಮಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.