ಬೆಳ್ತಂಗಡಿ: ಕೃಷಿಕರೋರ್ವರನ್ನು ಕೊಲೆಗೈದಿರುವ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೀನಾಕ್ಷಿ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತರನ್ನು ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ) ಎನ್ನಲಾಗಿದೆ.
ಆರೋಪಿಯನ್ನು ಜಯಚಂದ್ರ ಎನ್ನಲಾಗಿದೆ.
ಮೀನಾಕ್ಷಿ ರವರು ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ದೇವಸ ಎಂಬಲ್ಲಿರುವ ತನ್ನ ತವರು ಮನೆಗೆ ಬಂದಿದ್ದ ವೇಳೆ ತವರು ಮನೆಯಲ್ಲಿ ತಂದೆ ಕೆಂಚಪ್ಪ ಗೌಡ ತಾಯಿ ಕುಂಞಮ್ಮ ಮತ್ತು ತಮ್ಮ ಸಾಂತಪ್ಪ ಎಂಬವರು ವಾಸವಾಗಿದ್ದು, ತಮ್ಮ ಸಾಂತಪ್ಪ ಗೌಡನು ಭಾರತೀಯ ಜೀವ ವಿಮಾ ನಿಗಮದಲ್ಲಿ ಏಜೆಂಟ್ ಕೆಲಸ ಮಾಡಿಕೊಂಡಿರುತ್ತಾನೆ.
ಜ.13 ರಂದು ಬೆಳಿಗ್ಗೆ ಸಾಂತಪ್ಪ ಗೌಡರು ಭಾರತೀಯ ಜೀವ ನಿಗಮದ ಕರ್ತವ್ಯಕ್ಕೆ ಮನೆಯಿಂದ ಹೊರಟು ಹೋಗುತ್ತಿರುವಾಗ ನೆರೆ ಮನೆಯ ಸಂಬಂಧಿ ಜಯಚಂದ್ರ ಎಂಬಾತನು ಮನೆಯಿಂದ ಮುಖ್ಯ ರಸ್ತೆಗೆ ಹೋಗುವ ಮಣ್ಣು ರಸ್ತೆಬದಿಯಲ್ಲಿ ಕೆಲಸದಾಳುಗಳೊಂದಿಗೆ ಗಿಡಗಂಟಿಗಳನ್ನು ತೆಗೆಯುತ್ತಿರುವ ಸಮಯ ಸಾಂತಪ್ಪನು ಜಯಚಂದ್ರರಲ್ಲಿ ರಸ್ತೆ ಬದಿಯಲ್ಲಿರುವ ಗಿಡಗಳನ್ನು ಏಕೆ ತೆಗೆಯುತ್ತೀರಿ ಎಂದು ಕೇಳಿದಾಗ ಜಯಚಂದ್ರನು ಅವಾಚ್ಯ ಶಬ್ದಗಳಿಂದ ಬೈದು, ನೀನು ಯಾರು ಕೇಳಲು ಎಂಬುದಾಗಿ ಅವ್ಯಾಚ ಶಬ್ದಗಳಿಂದ ಬೈಯುತ್ತಿರುವುದನ್ನು ಕೇಳಿದ ಮೀನಾಕ್ಷಿ ಹಾಗೂ ಅವರ ಮನೆಯ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ಜೋಸೆಫ್ ಎಂಬವರು ನೋಡುತ್ತಿದ್ದಂತೆ ಜಯಚಂದ್ರನು ಸಾಂತಪ್ಪ ನಿಗೆ ಕೈಯಲ್ಲಿದ್ದ ಕತ್ತಿಯಿಂದ ಏಕಾಎಕಿಯಾಗಿ ಎಡ ಬದಿಯ ಕೆನ್ನೆಗೆ ಹಾಗೂ ಹಿಂಬದಿಯ ಕುತ್ತಿಗೆಗೆ ಕಡಿದು ಕೊಲೆ ಮಾಡಿ ನಂತರ ಜಯಚಂದ್ರನು ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೀನಾಕ್ಷಿ ಮನೆಯವರಿಗೂ ಜಯಚಂದ್ರನ ಮನೆಯವರಿಗೂ ಜಮೀನು ವಿಚಾರದಲ್ಲಿ ಸುಮಾರು ವರ್ಷಗಳಿಂದ ತಕರಾರು ಇದ್ದು ಅದೇ ವಿಚಾರದಲ್ಲಿ ಜಯಚಂದ್ರನು ಸಾಂತಪ್ಪ ನನ್ನು ಕೊಲೆ ಮಾಡಿರುವುದಾಗಿದೆ ಆದ್ದರಿಂದ ಜಯಚಂದ್ರನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ 04/2022 ಕಲಮ;504,302 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.