ಪುತ್ತೂರು: ಹೆತ್ತ ತಾಯಿಯನ್ನೇ ಮಗ ಅತ್ಯಾಚಾರಗೈದು ಅಮಾನವೀಯವಾಗಿ ವರ್ತಿಸಿದ ಘಟನೆ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ನಡೆದಿದೆ.
ಆರೋಪಿಯನ್ನು ಕೆದಂಬಾಡಿ ಕುರಿಕ್ಕಾರದ ಜಯರಾಮ ರೈ ಎನ್ನಲಾಗಿದೆ.
ಮಹಿಳೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ.
58 ವರ್ಷ ಪ್ರಾಯದ ತನ್ನ ತಾಯಿಯೊಂದಿಗೆ ವಾಸವಾಗಿರುವ ಜಯರಾಮ ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಅವರ ರೂಮ್ ನಲ್ಲಿ ಮಲಗಿದ್ದು, ಮುಂಜಾನೆ ತಾಯಿ ಮಲಗಿದ್ದ ರೂಮ್ ಗೆ ಹೋಗಿ ಜಯರಾಮ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ತಾಯಿ ಆತನನ್ನು ತಳ್ಳಿ ಬೊಬ್ಬೆ ಹಾಕಿದಾಗ ಆತ ತಾಯಿಯ ಬಾಯಿಯನ್ನು , ಬಟ್ಟೆಯಿಂದ ಒತ್ತಿ ಹಿಡಿದು ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿ ತಾಯಿ ಪ್ರತಿಭಟಿಸಿದರೂ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಜ.13ರಂದು ಬೆಳಿಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಜಯರಾಮ ಬಲವಂತದಿಂದ ಅವರನ್ನು ಮನೆಯ ಹಾಲ್‌ಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ಮಹಿಳೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಲವಂತವಾಗಿ ಅತ್ಯಾಚಾರ ನಡೆಸಿ,ಜೀವ ಬೆದರಿಕೆಯೊಡ್ಡಿದ ಮಗ ಜಯರಾಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ನೀಡಿದ್ದಾರೆ.
ಆರೋಪಿಯ ವಿರುದ್ಧ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376(2)(n)506 ರಂತೆ ಪ್ರಕರಣ ದಾಖಲಾಗಿದೆ.