ಬಂಟ್ವಾಳ: ವ್ಯಕಿಯೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕಾರಾಜೆ ನಿವಾಸಿ ಜಲೀಲ್ ( 55) ಎನ್ನಲಾಗಿದೆ.
ಜಲೀಲ್ ರಾತ್ರಿ ವೇಳೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನೇತ್ರಾವತಿ ಸೇತುವೆಯಲ್ಲಿ ಬೈಕ್ ಚಪ್ಪಲಿ ಹಾಗೂ ಮೊಬೈಲ್ ಇದ್ದು, ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು. ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದಾಗ ಕಾರಾಜೆ ನಿವಾಸಿ ಜಲೀಲ್ ಎಂದು ಗುರುತು ಪತ್ತೆಯಾಗಿತ್ತು. ಆದರೆ ತಡ ರಾತ್ರಿವರೆಗೂ ಹುಡುಕಿದಾಗ ವ್ಯಕ್ತಿ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆಯಿಂದ ಸ್ಥಳೀಯ ಈಜುಗಾರ ಸತ್ತಾರ್ ಹಾಗೂ ಮೊಹಮ್ಮದ್ ರವರು ನದಿಯಲ್ಲಿ ಈಜಾಡಿ ಹುಡುಕಿದಾಗ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.