ಬೆಂಗಳೂರು: ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.
ಏಪ್ರಿಲ್-16 ರಿಂದ ಮೇ-4 ರವರೆಗೆ ಪರೀಕ್ಷೆ ನಿಗದಿ ಪಡಿಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ದಿನಾಂಕ ಫೆಬ್ರವರಿ-17 ರಿಂದ ಮಾರ್ಚ್-23 ರವರೆಗೆ. ಇನ್ನು ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾರ್ಚ್-14ರಿಂದ ಮಾರ್ಚ್ -25 ರವರೆಗೆ ನಡೆಸುವುದಾಗಿ ಪಿಯು ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಇಂತಿದೆ:
- ಏಪ್ರಿಲ್-16ರಂದು ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
- ಏಪ್ರಿಲ್-18ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- ಏಪ್ರಿಲ್-19ರಂದು ಮಾಹಿತಿ ತಂತ್ರಜ್ಞಾನ
- ಏಪ್ರಿಲ್-20ರಂದು ಇತಿಹಾಸ, ಭೌತಶಾಸ್ತ್ರ
- ಏಪ್ರಿಲ್-21ರಂದು ದ್ವಿತೀಯ ಭಾಷೆ
- ಏಪ್ರಿಲ್-22ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
- ಏಪ್ರಿಲ್-23ರಂದು ರಾಸಾಯನಶಾಸ್ತ್ರ, ಮನಃಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
- ಏಪ್ರಿಲ್-25ರಂದು ಅರ್ಥಶಾಸ್ತ್ರ
- ಏಪ್ರಿಲ್-26ರಂದು ಹಿಂದಿ
- ಏಪ್ರಿಲ್-28ರಂದು ಐಚ್ಛಿಕ ಕನ್ನಡ, ಅಕೌಂಟ್ಸ್, ಭೂವಿಜ್ಞಾನ
- ಏಪ್ರಿಲ್-29ರಂದು ಕನ್ನಡ
- ಏಪ್ರಿಲ್-30ರಂದು ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
- ಮೇ-02 ಭೂಗೋಳಶಾಸ್ತ್ರ, ಜೀವಶಾಸ್ತ್ರ
- ಮೇ-04 ಇಂಗ್ಲಿಷ್