ಮಂಗಳೂರು: ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ವಿವಾಹಿತ ಮಹಿಳೆ ನಾಪತ್ತೆಯಾದ ಘಟನೆ ಮಂಗಳೂರಿನ ಉರ್ವ ಸ್ಟೋರ್ ಬಳಿ ನಡೆದಿದೆ.
ನಾಪತ್ತೆಯಾದ ಮಹಿಳೆಯನ್ನು ಬೆಳ್ಳಾರೆ ಮೂಲದ ಪ್ರಸ್ತುತ ಮಂಗಳೂರಿನಲ್ಲಿರುವ ದಿವ್ಯ(29) ಎನ್ನಲಾಗಿದೆ.
ಬೆಳ್ಳಾರೆ ಕಲ್ಮಡ್ಕದ ಮನೆಯಿಂದ ಮುಂಜಾನೆ ಪತಿಯೊಂದಿಗೆ ಮಂಗಳೂರಿಗೆ ಬಂದಿದ್ದ ದಿವ್ಯ ಉರ್ವ ಸ್ಟೋರ್ ಬಳಿ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಬಳಿಕ ಬಾರದೆ, ಫೋನ್ ಕರೆಗೂ ಸಿಗದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.