ಬಂಟ್ವಾಳ: ಮನೆಯ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಮನೆಯ ಸಾಕುನಾಯಿಯ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ಅನಂತಾಡಿ ಗ್ರಾಮದ ಕೊಂಬಿಲದ ಕಿನ್ನಿ ಗದ್ದೆ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವೀರಕಂಭ ಕೊಡಾಜೆ ರಸ್ತೆಯಲ್ಲಿ ಸಿಗುವ ಕೊಂಬಿ ಲಎಂಬಲ್ಲಿನ ಆರಕ್ಷಕ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಹಿಂಭಾಗ ನೋಡಿದಾಗ ಚಿರತೆ ನಾಯಿಯನ್ನು ಕಚ್ಚುತ್ತಿರುವ ದೃಶ್ಯ ಕಂಡ ಬೆಚ್ಚಿ ಬಿದ್ದಿದ್ದಾರೆ. ಸುಮಾರು20 ಮೀಟರ್ ದೂರ ನಾಯಿಯನ್ನು ಎಳೆದೊಯ್ಯಲು ಚಿರತೆ ಯತ್ನಿಸಿದ್ದು , ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ.
ಈ ವೇಳೆ ಮನೆಯ ಎಲ್ಲಾ ಲೈಟ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿರತೆ ಕಾಡಿನಲ್ಲಿ ಮರೆಯಾಗಿದೆ ಎಂದು ಪ್ರತ್ಯಕ್ಷ ದರ್ಶಿ ಸುಂದರ್ ತಿಳಿದಿದ್ದಾರೆ. ಕೆಲದಿನಗಳ ಹಿಂದಷ್ಟೇ ಚಿರತೆ ಸಮೀಪದ ರಸ್ತೆಯಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡಿತ್ತು, ಇದೀಗ ಮತ್ಥೆ ನಾಯಿಯ ಮೇಲೆ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬಂಟ್ವಾಳ ಎಎಸ್ಪಿ ಕಛೇರಿಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮ ರವರು ಘಟನೆ ಕುರಿತಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಬಂಧನಕ್ಕೆ ಪಂಜರ ಅಳವಡಿಸುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.