ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಇಡೆಪುಣಿ ದಿ. ಕೊರಗಪ್ಪ ಶೆಟ್ಟಿಯವರ ಪುತ್ರ ದಿನೇಶ್ ಶೆಟ್ಟಿ(40)ರವರು ಜ.23 ರಂದು ನಿಧನರಾದರು.
ದಿನೇಶ್ ರವರು ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಮುಂಬೈಯ ಥಾಣೆಯಲ್ಲಿ ಹೊಟೇಲ್ ಉದ್ಯೋಗದಲ್ಲಿದ್ದರು. ಎರಡು ವರ್ಷದ ಹಿಂದೆ ತನ್ನ ತಂದೆ ಕೊರಗಪ್ಪ ಶೆಟ್ಟಿ ನಿಧನರಾದ ಬಳಿಕ ಊರಲ್ಲಿಯೇ ಇದ್ದ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಉಪಾಧ್ಯಕ್ಷರಾಗಿ ಹಾಲಿ ಸಾಂಸ್ಕೃತಿಕ ಜತೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.
ಮೃತರು ತಾಯಿ ಶಾಂಭವಿ ಶೆಟ್ಟಿ, ಪತ್ನಿ ನಳಿನಾಕ್ಷಿ, ಮಗ ಪ್ರಹನ್ ಶೆಟ್ಟಿ, ಸಹೋದರಿಯರಾದ ದೀಪ, ದಿವ್ಯ ಮತ್ತು ಬಾವಂದಿರನ್ನು ಅಗಲಿದ್ದಾರೆ.