ಮಂಗಳೂರು: ನಗರದ ಕುದ್ರೋಳಿಯಲ್ಲಿರುವ ಪೇಂಟರ್ ಪತಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರು ತಿಂಗಳ ಹಿಂದೆ ಅಸ್ಸಾಂನಿಂದ ಕಿಡ್ನಾಪ್ ಮಾಡಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಜ.21 ರ ಬೆಳಿಗ್ಗೆ ಸೂಫಿಯಾ ಬೇಗಂ (17) ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಪತಿ ಎಂದು ಹೇಳಿಕೊಳ್ಳುವ ಪೇಂಟರ್ ಸ್ವಾಹಿದುಲ್ ಅಸ್ಲಂ ಲಷ್ಕರ್ (30) ಪೊಲೀಸ್ ದೂರು ದಾಖಲಿಸಿದ್ದಾನೆ.
ದೂರಿನ ಪ್ರಕಾರ ಆಕೆಯ ಮೃತದೇಹವು ಕೊಣೆಯ ಕಿಟಕಿಯ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಯುವತಿಯನ್ನು ಪ್ರೀತಿಸುತ್ತಿದ್ದ ಸ್ವಾಹಿದುಲ್ ಕಿಡ್ನಾಪ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ಮೃತ ಬಾಲಕಿ ಮತ್ತು ಸ್ವಹಿಲ್ದುಲ್ ನಡುವೆ ಘರ್ಷಣೆ ನಡೆದಿದ್ದು, ನಂತರ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ವದಂತಿಗಳಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ.