ಪುತ್ತೂರು: ಅತಿ ವೇಗದಲ್ಲಿದ್ದ ಬೈಕೊಂದು ಮೂರು ದ್ವಿಚಕ್ರ ವಾಹನಗಳಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಘಟನೆ ಜ.27 ರಂದು ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಅತಿ ವೇಗದಲ್ಲಿದ್ದ ಡ್ಯೂಕ್ ಬೈಕ್, ಡಿಯೋ ಮತ್ತು ಎರಡು ಬೈಕ್ ಗಳಿಗೆ ಹಿಂದಿನಿಂದ ಬಂದು ಡಿಕ್ಕಿಯೊಡೆದಿದ್ದು, ಅಪಘಾತದಿಂದಾಗಿ ಓರ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಪುತ್ತೂರು ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.