ವಿಟ್ಲ: ಕೇಪು ಗ್ರಾಮದ ಕಲ್ಲoಗಳ ನೀರ್ಕಜೆ ರಸ್ತೆಯ( ಕೇಪು ಉಳ್ಳಾಲ್ತಿ ದೈವಸ್ಥಾನವನ್ನು ಸಂಪರ್ಕಿಸುವ ರಸ್ತೆ) ಕಾಮಗಾರಿ ಭರದಿಂದ ಸಾಗುತ್ತಿದ್ದು, ಗ್ರಾಮಸ್ಥರಲ್ಲಿ ರಸ್ತೆಗೆ ಕಾಂಕ್ರೀಟ್ ಭಾಗ್ಯದ ಖುಷಿ ಮನೆಮಾಡಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ರವರ ಅನುದಾನದಿಂದ ಸುಮಾರು 50 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು ಇಂದು ಗ್ರಾಮದ ಹಲವು ಪ್ರಮುಖರು ಹಾಗೂ ಶಾಸಕರು ಕಾಮಗಾರಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಘವ ಮಣಿಯಾಣಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸದಸ್ಯ ರಾಜೇಶ್ ಕರವೀರ, ಪಂಚಾಯತ್ ಸದಸ್ಯರುಗಳಾದ ಜಗಜ್ಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ್ ಕಲ್ಲಂಗಳ, ಬೂತ್ ಅಧ್ಯಕ್ಷ ಅಶೋಕ್ ಕೋಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.