ವಿಟ್ಲ: ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀಗೆ ಆಯ್ಕೆಯಾದ ಮಹಾಲಿಂಗ ನಾಯ್ಕ ಅವರ ಮನೆಗೆ ಪೆರುವಾಯಿ ಹಾಗೂ ಮನೆಲಾ ಚರ್ಚ್‌ನ ಧರ್ಮಗುರುಗಳು ಭೇಟಿ ನೀಡಿ ಸನ್ಮಾನಿಸಿದರು.
ಮಹಾಲಿಂಗ ನಾಯ್ಕ ಮನೆಗೆ ಭೇಟಿ ನೀಡಿದ ಮುಚ್ಚಿರಪದವು ಫಾತಿಮಾ ಚರ್ಚ್‌ನ ಧರ್ಮಗುರು ವ.ವಿಶಾಲ್ ಮೊನೀಸ್ ಹಾಗೂ ಪುಣಚದ ಮನೆಲಾದಲ್ಲಿರುವ ಕ್ರಿಸ್ತರಾಜ ಚರ್ಚ್‌ನ ಧರ್ಮಗುರು ವ. ಪಾವ್ಲ್ ಪ್ರಕಾಶ್ ಅವರು ಮಹಾಲಿಂಗ ನಾಯ್ಕ ಕಾರ್ಯವನ್ನು ಗಮನಿಸಿ ಶ್ಲಾಘಿಸಿ, ಸನ್ಮಾನಿಸಿದರು.
ಈ ವೇಳೆ ಮಾಣಿಲ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಜೇಶ್ ಬಾಳೆಕಲ್ಲು ಹಾಗೂ ಮುಚ್ಚಿರಪದವು ಫಾತಿಮಾ ಚರ್ಚ್‌ನ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಉಪಸ್ಥಿತರಿದ್ದರು.