ವಿಟ್ಲ: ಯಾರೋ ದುಷ್ಕರ್ಮಿಗಳು ಸಾಕು ದನದ ಕಾಲನ್ನು ಕತ್ತರಿಸಿದ ಘಟನೆ ಅಡ್ಯನಡ್ಕದಲ್ಲಿ ಜ.28 ರಂದು ಸಂಜೆ ನಡೆದಿದೆ.
ಅಡ್ಯನಡ್ಕ ಸಮೀಪದ ಕೆದುಮೂಲೆ ನಿವಾಸಿಯಾದ ಕೃಷಿಕರೊಬ್ಬರ ಸಾಕು ದನದ ಕಾಲನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ದುಷ್ಕರ್ಮಿಗಳು ಕ್ರೂರವಾಗಿ ಕತ್ತರಿಸುವ ಮೂಲಕ ರಾಕ್ಷಸೀಕೃತ್ಯ ಮೆರೆದಿದ್ದಾರೆ.
ಮೂಕಪ್ರಾಣಿಯ ಮೇಲೆ ಇಂತಹ ಪೈಶಾಚಿಕ ಕೃತ್ಯವೆಸಗುವ ಮನಸ್ಸುಗಳು ಸಮಾಜಕ್ಕೆ ಮಾರಕ ಎಂಬುವುದರಲ್ಲಿ ಎರಡು ಮಾತಿಲ್ಲ. ದುಷ್ಕರ್ಮಿಗಳು ಯಾವುದೇ ಜಾತಿ-ಧರ್ಮಕ್ಕೆ ಸೇರಿದವರಾಗಿದ್ದರೂ ಮೂಕ ಪ್ರಾಣಿಗಳೊಂದಿಗೆ ಇಂತಹ ರಾಕ್ಷಸತನ ಮೆರೆದಿದ್ದು ಖಂಡನೀಯವಾಗಿದೆ. ಹಸಿ ಜೀವವೊಂದನ್ನು ನೋಯಿಸಿ ಸುಖಕಾಣುವ ದುಷ್ಟರಿಗೆ ಶೀಘ್ರ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.