ಮಂಗಳೂರು: ಕೋವಿಡ್ ಮೂರನೇಯ ಅಲೆಯಿಂದಾಗಿ ರಾಜ್ಯಾದ್ಯಂತ ನೈಟ್ ಹಾಗೂ ವಿಕೇಂಡ್ ಕರ್ಫ್ಯೂ ಹೇರಳ್ಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕಂಬಳ ಸಮಿತಿಯಿಂದ ನಡೆಯುತ್ತಿರುವ ಕಂಬಳಗಳು ಮುಂದೂಡಲಾಗಿತ್ತು. ಈ ಸಾಲಿನ ಕಂಬಳದ ಋತು ನ. 27 ರಿಂದ ಆರಂಭಗೊಂಡಿತ್ತಾದರೂ ಆ ಬಳಿಕ ಬೆರಳೆಣಿಕೆಯ ಕಂಬಳ ಕೂಟಗಳಷ್ಟೇ ಪೂರ್ಣಗೊಂಡಿದ್ದವು.
ಜನವರಿ ಮೊದಲ ವಾರದಿಂದ ಯಾವುದೇ ಕಂಬಳ ಕೂಟಗಳು ನಡೆದಿರಲಿಲ್ಲ. ಇದೀಗ ರಾಜ್ಯ ಸರಕಾರ ಜ. 31 ರ ಬಳಿಕ ನೈಟ್ ಹಾಗೂ ವಿಕೇಂಡ್ ಕರ್ಫ್ಯೂ ತೆರವುಗೊಳಿಸಿ ರಾಜ್ಯ ಸರಕಾರ ಆದೇಶಿಸಿದ್ದು , ಈ ಹಿನ್ನಲೆಯಲ್ಲಿ ಸಭೆ ಸೇರಿದ ಜಿಲ್ಲಾ ಕಂಬಳ ಸಮಿತಿಯ ಬಾಕಿಯುಳಿದ ಕಂಬಳ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ದಪಡಿಸಿದೆ.
ಪರಿಷ್ಕೃತ ವೇಳಾಪಟ್ಟಿಯ ಅನುಸಾರ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಕಂಬಳ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕಂಬಳವು ಮಾ.19 ರಂದು ಹಾಗೂ ಉಪ್ಪಿನಂಗಡಿ ಕಂಬಳವು ಎ.2 ರಂದು ನಡೆಯಲಿದೆ.
ಪರಿಷ್ಕೃತ ವೇಳಾಪಟ್ಟಿ:
- 05-02-2022 ಶನಿವಾರ – ಬಾರಾಡಿ ಬೀಡು ಕಂಬಳ
- 13-02-2022 ರವಿವಾರ – ಅಡ್ವೆ ನಂದಿಕೂರ್
- 19-02-2022 ಶನಿವಾರ – ವಾಮಂಜೂರು ಕಂಬಳ
- 26-02-2022 ಶನಿವಾರ – ಐಕಳ ಬಾವ ಕಂಬಳ
- 05-03-2022 ಶನಿವಾರ – ಪೈವಳಿಕೆ ಕಂಬಳ
- 12-03-2022 ಶನಿವಾರ – ಕಟಪಾಡಿ ಕಂಬಳ
- 19-03-2022 ಶನಿವಾರ – ಪುತ್ತೂರು ಕಂಬಳ
- 26-03-2022 ಶನಿವಾರ – ಬಂಗ್ರಕೂಳೂರು, ಮಂಗಳೂರು ಕಂಬಳ
- 2-04-2022- ಉಪ್ಪಿನಂಗಡಿ ಕಂಬಳ
- 9-04-2022 – ಬಂಗಾಡಿ ಕಂಬಳ
- 16-04-2022- ವೇಣೂರು ಕಂಬಳ