ಕಡಬ: ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಆಲಂಕಾರಿನ ಯುವಕನೋರ್ವ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ಜ.31ರಂದು ನಡೆದಿದೆ.
ಮೃತರನ್ನು ಆಲಂಕಾರು ಗ್ರಾಮದ ಶರವೂರು ನಿವಾಸಿ ರಾಜೀವಿ ಎಂಬವರ ಪುತ್ರ ನಂದೀಪ್ (21) ಎನ್ನಲಾಗಿದೆ.
ನಂದೀಪ್ ಬೆಂಗಳೂರಿನ ಜಿಗನಿಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಬೆಳಿಗ್ಗೆ ಕೆಲಸಕ್ಕೆಂದು ಹಳೆನೇರಂಕಿ ನಿವಾಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆಟೋ ರಿಕ್ಷವೊಂದು ತಕ್ಷಣ ಬಲಕ್ಕೆ ತಿರುಗಿದಾಗ ಅದಕ್ಕೆ ಬೈಕ್ ಡಿಕ್ಕಿ ಹೊಡೆದು ನಂದೀಪ್ ರಸ್ತೆಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ತಲೆ ಮೇಲೆಯೇ ಸಂಚರಿಸಿದ ಪರಿಣಾಮ ನಂದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ನಂದೀಪ್ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.