ವಿಟ್ಲ: ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರುಗಳ ಶುಭಾಶೀರ್ವಾದದೊಂದಿಗೆ ದಯಾ ಕ್ರಿಯೇಷನ್ ಅರ್ಪಿಸುವ, ರವಿ ಎಸ್.ಎಂ. ಕುಕ್ಕಾಜೆ ರವರ ಸಾಹಿತ್ಯದಲ್ಲಿ, ಮೂಡಿಬಂದಿರುವ ‘ಕುಕ್ಕಾಜೆದ ಪಿಂಗಾರದ ಪುರ್ಪ’ ತುಳು ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಗೊಂಡಿತು.
ತುಳು ಭಕ್ತಿಗೀತೆಯು ದಯಾನಂದ ಅಮೀನ್ ಬಾಯರ್ ರವರ ನಿರ್ದೇಶನದಲ್ಲಿ, ಅವನಿ ಎಂ.ಎಸ್. ಸುಳ್ಯ ರವರ ಕಂಠಸಿರಿಯಲ್ಲಿ ಮೂಡಿಬರಲಿದೆ.