ಬೆಳ್ತಂಗಡಿ: ಬದ್ಯಾರು ನಿವಾಸಿ ವಿಲಿಯಂ ಹಾಗೂ ಅನಿತ ಡಿ’ಸಿಲ್ವ ದಂಪತಿಗಳ ಪುತ್ರಿ ಏಂಜಲ್ ಅನುಷಾ ಡಿಸಿಲ್ವ(11) ರವರು ಅನಾರೋಗ್ಯದಿಂದಾಗಿ ಫೆ.2 ರಂದು ಬೆಂಗಳೂರಿನ ಆಸ್ಟರ್ ಸಿ.ಎಂ.ಐ ಆಸ್ಪತ್ರೆಯಲ್ಲಿ ನಿಧನರಾದರು.
ಬೆಳ್ತಂಗಡಿ ಚರ್ಚ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಏಂಜಲ್ ಅನುಷಾ ಡಿಸಿಲ್ವ ರವರು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪಠ್ಯ ಹಾಗೂ ಪತ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಕೆಲದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅನುಷಾ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಜಾಂಡಿಸ್ ಕಾಯಿಲೆ ಉಲ್ಬಣಗೊಂಡ ಪರಿಣಾಮ ಲಿವರ್ ಗೆ ಹಾನಿಯಾಗಿದ್ದು, ಲಿವರ್ ಕಸಿ ಮಾಡಲೆಂದು ಫೆ.1ರಂದು ಬೆಂಗಳೂರಿನ ಆಸ್ಟರ್ ಸಿ.ಎಂ.ಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಅನುಷಾ ತಂದೆ ವಿಲಿಯಂ, ತಾಯಿ ಅನಿತ ಡಿ’ಸಿಲ್ವ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.