ಪುತ್ತೂರು: ಜೆಸಿಐ ಪುತ್ತೂರು ಘಟಕದ ಮಾಜಿ ಅಧ್ಯಕ್ಷ, ಮಾಜಿ ವಲಯ ಉಪಾಧ್ಯಕ್ಷ ಪಶುಪತಿ ಶರ್ಮ ಅವರು ಜೇಸಿಐ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ.
2006 ರಿಂದ ಜೇಸಿಐ ಪುತ್ತೂರಿನ ಕ್ರಿಯಾಶೀಲ ಸದಸ್ಯರಾಗಿದ್ದು ಜೇಸಿಐ ವಲಯ ತರಬೇತುದಾರರಾಗಿ, 2017ರಲ್ಲಿ ಜೇಸಿಐ ಪುತ್ತೂರಿನ ಅಧ್ಯಕ್ಷರಾಗಿ ಬಹಳಷ್ಟು ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಬಹಳಷ್ಟು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಶುಪತಿ ಶರ್ಮ ರವರು ಸಂಘಟಿಸಿದ್ದರು.
ಜೇಸಿಐ ವಲಯ-15 ಹಾಗೂ ಜೇಸಿಐ ಭಾರತದಲ್ಲೇ ಜೇಸಿಐ ಪುತ್ತೂರಿನ ಘನತೆಯನ್ನು ಎತ್ತಿಹಿಡಿದು ಅನೇಕ ಪ್ರಶಸ್ತಿ, ಮನ್ನಣೆಗಳಿಗೆ ಭಾಜನರಾದ ಪಶುಪತಿ ಶರ್ಮ ರವರು ತದನಂತರ ವಲಯ ಉಪಾಧ್ಯಕ್ಷರಾಗಿ, ವಿವಿಧ ವಲಯದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ರೋಟರಿ ಕ್ಲಬ್ ಪುತ್ತೂರು ಯುವದ ಸ್ಥಾಪಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾದ ಮಂಗಳೂರು ಘಟಕದ ಸ್ಥಾಪಕ ಅಧ್ಯಕ್ಷರು. 2021ರಲ್ಲಿ “ಚಾಲೆಂಜ್’ ಜೇಸಿಐ ಭಾರತದ ರಾಷ್ಟ್ರೀಯ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿದ್ದು, ಪ್ರಸ್ತುತ ಜೇಸಿಐ ಭಾರತದ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆಗೊಂಡಿರುವ ಇವರು ಪುತ್ತೂರಿನ ದರ್ಬೆಯಲ್ಲಿರುವ ಸೌತ್ ಕೆನರಾ ಸಂಸ್ಥೆಯ ಮಾಲಕರಾಗಿದ್ದು ಎಲ್.ಇ.ಡಿ ಫ್ಯಾನ್ಸ್, ಲೈಟ್ಸ್, ಲೀಥಿಯಮ್ ಇನ್ವರ್ಟರ್ ಹಾಗೂ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ಸ್ ವ್ಯವಹಾರವನ್ನು ನಡೆಸುತ್ತಿದ್ದಾರೆ.



























