ಪುತ್ತೂರು: ಮದ್ರಸಾದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ಸಂಶುಲ್ ಹುದಾ ಮದ್ರಸಾ ಶಾಲೆಯ ಉಸ್ತಾದ್ ಸಿರಾಜುದ್ದೀನ್ ಮದನಿ ಎಂಬಾತನನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪುತ್ತಿಲ ಗ್ರಾಮದ ಕುಂಡಡ್ಕದ ಸಂಶುಲ್ ಹುದಾ ಮದ್ರಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಬ್ಬರು ಮನೆಗೆ ಬಂದು ತಮ್ಮ ಮೇಲೆ ಉಸ್ತಾದ್ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಬಗ್ಗೆ ತಾಯಿಗೆ ತಿಳಿಸಿದ್ದು, ಹೆಣ್ಮಕ್ಕಳ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೆಣ್ಣು ಮಕ್ಕಳು ಧರಿಸಿದ್ದ ಬಟ್ಟೆ ಸರಿಸಿ ಮೈ ಮುಟ್ಟಿ ದೇಹವೆಲ್ಲ ಸವರಿದ್ದಲ್ಲದೇ ಅಪ್ಪಿ ಹಿಡಿದಿರುವುದಾಗಿಯೂ, ಹೆಣ್ಮಕ್ಕಳನ್ನು ಏನಾದರೂ ಕಾರಣ ಹೇಳಿ ಉಸ್ತಾದ್ ತನ್ನ ರೂಮಿಗೆ ಕರೆಸಿಕೊಂಡು ಜನನಾಂಗವನ್ನು ಮುಟ್ಟುತ್ತಿದ್ದ ಎಂದೂ ಕಳೆದ ಒಂದು ವರ್ಷದಿಂದ ಈ ರೀತಿ ಅಸಭ್ಯವಾಗಿ ಉಸ್ತಾದ್ ಸಿರಾಜುದ್ದೀನ್ ಮದನಿ ವರ್ತಿಸಿರುವುದಾಗಿಯೂ ಹೆಣ್ಣು ಮಕ್ಕಳು ತಿಳಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಮೂಲತಃ ಉರುವಾಲುಪದವು ನಿವಾಸಿಯಾಗಿರುವ ಉಸ್ತಾದ್ ಸಿರಾಜುದ್ದೀನ್ ಮದನಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಇನ್ಸ್ಪೆಕ್ಟರ್ ಎಂ.ಎನ್. ರಾವ್ ಮತ್ತು ಎಸ್.ಐ. ಸೇಸಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
























