ಕಡಬ: ಅಪ್ರಾಪ್ತ ಯುವತಿಯೋರ್ವಳ ಜೊತೆ ಅಸಭ್ಯವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿ ಹಾಗೂ ಯುವತಿಗೆ ಹಲ್ಲೆ ಮಾಡಿದ ಆರೋಪದಡಿ ಆತನ ಪತ್ನಿಯ ವಿರುದ್ಧ ಕಡಬ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಯುವತಿಯ ಮಾವನ ಮಗ ಜಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವತಿಯೋರ್ವಳು ತೋಟದಲ್ಲಿ ನೀರು ಹಾಯಿಸುವ ಸಲುವಾಗಿ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ವೇಳೆ ಆಕೆಯ ಮಾವನ ಮಗ ಜಾನ್ ಎಂಬಾತ “ನಾನು ರೇಪ್ ಮಾಡುತ್ತೇನೆಂದು ನೀನು ಪ್ರಚಾರ ಪಡಿಸಿದ್ದು, ಈಗ ರೇಪ್ ಮಾಡಿ
ತೋರಿಸುತ್ತೇನೆ” ಎಂದು ಹೇಳಿ ಪ್ಯಾಂಟ್ ಜಾರಿಸಲು ಯತ್ನಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ವಿಷಯ ತಿಳಿದು ತೋಟಕ್ಕೆ ಬಂದಿದ್ದ ಯುವತಿಯ ಅಜ್ಜಿ ಮರಿಯಮ್ಮ ಎಂಬವರಿಗೂ ಹಲ್ಲೆ ಮಾಡಿದಲ್ಲದೆ, ಆರೋಪಿಯ ಪತ್ನಿ ಜೆನ್ಸಿಯೂ ಯುವತಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅಪ್ರಾಪ್ತ ಯುವತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.