ಪುತ್ತೂರು: ಕಡಿಮೆ ಬಡ್ಡಿಗೆ ಹೋದ ಟೆಂಡರ್‌ಗೆ ಸರಕಾರಿ ದರಕ್ಕೆ ಮಾತುಕತೆ: ಸರಕಾರಿ ಸವಾಲಿಗಿಂತಲೂ ಕಡಿಮೆ ಬಿಡ್ಡಿನಲ್ಲಿ ಕೇಳಿದ ಸಂತೆ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ ಬಳಿ ವಾಹನ ತಂಗುದಾಣ, ಒಣಮೀನು ಮಾರುಕಟ್ಟೆಯನ್ನು ಬಿಡ್ಡುದಾರದಿಂದ ಸರಕಾರಿ ಸವಾಲು ಪಡೆಯುವಂತೆ ಮಾತುಕತೆ ನಡೆಸಲು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ಪ್ರಸ್ತಾಪಿಸಿದರು. ಮುಂದೆ ಅಲ್ಪಾವಧಿ ಟೆಂಡರ್ ಕರೆಯುವುದಕ್ಕಿಂತ ಸರಕಾರಿ ಸವಾಲಿನಲ್ಲಿ ಏನು ದರ ನಿಗದಿಪಡಿಸಲಾಗಿದೆಯೋ ಅದನ್ನೇ ಪಡೆಯಲು ಸದಸ್ಯರ ಒಪ್ಪಿಗೆ ಇದ್ದಲ್ಲಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
ಸದಸ್ಯರು ಒಮ್ಮತ ಸೂಚಿಸಿದರು. ಅದೇ ರೀತಿ ನಿರುಪಯುಕ್ತ ನಳ್ಳಿ ನೀರಿನ ಸಾಮಾಗ್ರಿ ಬಗ್ಗೆ ವಿಲಂ ಸಂದರ್ಭ ಸರಕಾರಿ ಸವಾಲು ರೂ. 110ಸಾವಿರ ಇದ್ದರೂ ರೂ. 5 ಸಾವಿರಕ್ಕೆ ಬಿಟ್ಟು ಹೋಗಿದ್ದು, ಇದನ್ನು ಅದೇ ಬಿಡ್ಡುದಾರರಿಗೆ ಕೊಡುವುದು ಸೂಕ್ತ. ಇಲ್ಲವಾದಲ್ಲಿ ಅದನ್ನು ಖರೀದಿ ಮಾಡುವವರು ಯಾರೂ ಇಲ್ಲ ಎಂದು ಅಧ್ಯಕ್ಷರು ಹೇಳಿದರು. ವಾರದೊಳಗೆ ಶಾಲಾ ಮಕ್ಕಳ ಸಮೀಕ್ಷೆ ಪೂರ್ಣವಾಗಬೇಕು: ಶಾಲೆಯಿಂದ ಹೊರಗುಳಿದವರ ಮಕ್ಕಳ ಸಮೀಕ್ಷೆಗೆ ನಗರಸಭೆ ಸಿಬ್ಬಂದಿಗಳನ್ನು ಕಳುಹಿಸುವುದರಿಂದ ಖಾತೆ, ಬಿಲ್ಡಿಂಗ್ ಸೇರಿದಂತೆ ಅನೇಕ ಕೆಲಸಗಳು ಪೆಂಡಿಂಗ್ ಆಗುತ್ತದೆ. ಈ ನಿಟ್ಟಿನಲ್ಲಿ ತಮ್ಮ
ತಮ್ಮ ವಾರ್ಡ್‌ನಲ್ಲಿ ಸದಸ್ಯರು ಸಮೀಕ್ಷೆಗೆ ಸಹಕರಿಸುವಂತ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದರು.
ತೆರಿಗೆಯಿಂದ ಬಡವರಿಗೆತೊಂದರೆ ಆಗಬಾರದು: ತೆರಿಗೆಪರಿಷ್ಕರಣೆಯಿಂದ ಬಡವರಿಗೆ ತೊಂದರೆಆಗಬಾರದು.ನಗರಸಭೆ ವ್ಯಾಪ್ತಿಯಲ್ಲಿಹಲವು ಕಡೆ ಬಡವರಿದ್ದಾರೆ. ಅವರ ಖಾಲಿನಿವೇಶನಕ್ಕೆ ತೆರಿಗೆ ವಿಧಿಸಿದರೆ ಅವರಿಗೆತೊಂದರೆ ಆಗಲಿದೆ ಮತ್ತು ಈಗ ತೆರಲಾದಕಟ್ಟಡ ತೆರಿಗೆ ಸವಕಲೆ ಆಧಾರದಲ್ಲಿಕಡಿಮೆ ಆಗುವುದಾದರೆ 10 ವರ್ಷದ ಹಳಕಟ್ಟಡಕ್ಕೆ ಯಾವ ರೀತಿಯ ಮಾನದಂಡವಿಧಿಸಲಾಗುತ್ತದೆಸದಸ್ಯಮಹಮ್ಮದ್ ರಿಯಾಝ್ ಪ್ರಶ್ನಿಸಿದರು.ಈಕುರಿತು ನಗರಸಭೆ ಸಹಾಯಕಕಾರ್ಯಪಾಲಕ ಅಭಿಯಂತರ ಅರುಣ್ಅವರು ಮಾಹಿತಿ ನೀಡಿದರು. ನಗರಸಭೆಅಧ್ಯಕ್ಷ ಜೀವಂಧರ್ ಜೈನ್ ಅವರು ತೆರಿಗೆವಿಚಾರಕ್ಕೆ ಸಂಬಂಧಿಸಿ ಸಮಗ್ರ ಮಾಹಿತಿಯಪ್ರತಿಯನ್ನು ಸದಸ್ಯರಿಗೆ ನೀಡುವಂತೆತಿಳಿಸಿದರು. ಸದಸ್ಯಸದಸ್ಯ ಪಿ.ಜಿ.ಜಗನ್ನಿವಾಸರಾವ್ ಅವರು ತೆರಿಗೆಯಿಂದ ಬಡವರಿಗೆಬಹಳ ಪ್ರಯೋಜನ ಆಗಿದೆ ಎಂದು ತಿಳಿಸಿದರು.
ತಮ್ಮ ವಾರ್ಡ್‌ನಲ್ಲಿ ಸದಸ್ಯರಿಗೆ ನಗರಸಭೆ ಕಡೆಯಿಂದ ಸಿಬ್ಬಂದಿಯನ್ನು ನಿಯೋಜಿಸಿ ಆದಷ್ಟು ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ವಿನಂತಿಸಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತ ರೂಪಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯರಾದ ಬಿ.ಶೈಲಾ ಪೈ, ಬಾಲಚಂದ್ರ, ಸಂತೋಷ್ ಕುಮಾರ್, ಸುಂದರ ಪೂಜಾರಿ ಬಡಾವು ಚರ್ಚೆಯಲ್ಲಿ ಭಾಗವಹಿಸಿದ್ದರು. ಸದಸ್ಯರಾದ ಶಿವರಾಮ ಎಸ್, ವಸಂತ ಕಾರಕ್ಕಾಡು, ಕೆ.ಫಾತಿಮತ್ ಝರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ, ರೋಬಿನ್ ತಾವೋ, ಪ್ರೇಮ್ ಕುಮಾರ್, ಪದ್ಮನಾಭ ನಾಯ್ ಪಡೀಲ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಯಶೋಧ ಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಬಿ.ಶೈಲಾ ಪೈ, ಇಸುಬು, ಪೂರ್ಣಿಮ ಕೋಡಿಯಡ್ಕ ಸಭೆಯಲ್ಲಿ ಉಪಸ್ಥಿತರಿದ್ದರು.