ಮಂಗಳೂರು: ಪೊಲೀಸ್ ಸಿಬ್ಬಂದಿಯ ಮೇಲೆ ಚೂರಿ ಇರಿದಿರುವ ಘಟನೆ ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ನಡೆದಿದೆ.
ಕಾಸರಗೋಡು ಮೂಲದ ವ್ಯಕ್ತಿಯೊಬ್ಬ ಬಂದರ್ ಠಾಣೆಯ ಪೊಲೀಸ್ ಸಿಬ್ಬಂದಿ ವಿನೋದ್ ಎಂಬವರಿಗೆ ಚೂರಿ ಇರಿದಿದ್ದಾನೆ ಎನ್ನಲಾಗಿದೆ.
ದುಬಾರಿ ಬೆಲೆಯ ವಾಚ್ ಮಾರಾಟಕ್ಕಾಗಿ ಕಾಸರಗೋಡು ಮೂಲದ ವ್ಯಕ್ತಿ ಬಂದಿದ್ದು, ಆತನ ಮೇಲೆ ಅನುಮಾನಗೊಂಡ ಅಂಗಡಿಯ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಬಂದರ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ವ್ಯಕ್ತಿ ಚೂರಿ ಇರಿದಿದ್ದು, ಗಾಯಗೊಂಡ ವಿನೋದ್ ರವರನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.


























