ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನ ಬಂಧಿಸಲಾಗಿದೆ. 12 ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಮುರುಗನ್ ಮುರುಗನ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಅಫಾನ್, ಚಿಕು, ಖಾಸಿಫ್, ಖಾಸಿ ಅಲಿಯಾಸ್ ಸಲ್ಮಾನ್ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆಯನ್ನ ಮುಂದುವರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಡಿಜಿಪಿ ಎಸ್ ಮುರುಗನ್, ಶಿವಮೊಗ್ಗ ನಗರ ಈಗ ಶಾಂತವಾಗಿದೆ. ಜನರು ಯಾವುದೇ ಆತಂಕ ಭಯವಿಲ್ಲದೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಇವತ್ತು ಬೆಳಗ್ಗೆ ಹೊರವಲಯದಲ್ಲಿ ವೆಹಿಕಲ್ಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕರು ಭಯ ಪಡಬೇಕಾಗಿಲ್ಲ. ಇಲ್ಲಿಯವರೆಗೂ ಎಂಟು ಎಫ್ಐಆರ್ ಹಾಕಲಾಗಿದೆ. 144 ಮತ್ತು ಕರ್ಫ್ಯೂಗಳನ್ನ ಮುಂದುವರೆಸಲಾಗುತ್ತೆ ಎಂದು ಅವರು ತಿಳಿಸಿದ್ದಾರೆ.